ಕೊಡಗಿನ ಪತ್ರಿಕೋದ್ಯಮಿ ಹಾಗೂ ಸಾಹಿತಿ ಶ್ರೀ ಬಿ ಡಿ ಗಣಪತಿಯವರು ಕತೆ, ಕಾದಂಬರಿ, ಕವನ, ಪ್ರಬಂಧ, ನಾಟಕ, ವೈಚಾರಿಕ ಲೇಖನಗಳೇ ಅಲ್ಲದೆ, ತಮ್ಮ ಜನ್ಮಭೂಮಿಯಾದ ಕೊಡಗು ಮತ್ತು ಅಲ್ಲಿಯ ಜನ ಜೀವನವನ್ನು ಕುರಿತು ಕೊಡವ, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಉತ್ತಮ ಕೃತಿಗಳನ್ನು ರಚಿಸಿದರು. ಅವರು ರಚಿಸಿ ಪ್ರಕಟಿಸಿದ ಕೃತಿಗಳು ಸುಮಾರು ಮೂವತ್ತು.